Puneeth Rajkumar Appu; ಪವರ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮಾರ್ಚ್ 14ಕ್ಕೆ ‘ಅಪ್ಪು’ ರೀ- ರೀಲಿಸ್

ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ Puneeth Rajkumar ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವರ ಹುಟ್ಟುಹಬ್ಬವಾದ ಮಾರ್ಚ್ 14ಕ್ಕೆ ಅವರ ಮೊದಲ ಚಿತ್ರ ‘ಅಪ್ಪು’ ರೀ- ರೀಲಿಸ್ ಆಗಲಿದೆ. PRK Productions ಪುನೀತ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಅಪ್ಪು’ ಚಿತ್ರ ಮತ್ತೆ ಬಿಡುಗಡೆ ಮಾಡುತ್ತಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪ್ಪು ಮರು ಬಿಡುಗಡೆ ಕುರಿತು ಪಿಆರ್ ಕೆ ಪ್ರೊಡಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿಗೆ ಪುನೀತ್ ಅಭಿಮಾನಿಗಳಲ್ಲದೇ, ಚಿತ್ರ ಪ್ರೇಮಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಅಪ್ಪು ಚಲನಚಿತ್ರವು ಏಪ್ರಿಲ್ 26, 2002ರಲ್ಲಿ ಬಿಡುಗಡೆಯಾಗಿತ್ತು. ಚಿತ್ರಮಂದಿರಗಳಲ್ಲಿ 200 ದಿನಗಳ ಸತತ ಪ್ರದರ್ಶನ ಕಂಡಿತು. ಪುನೀತ್ ಮತ್ತು ರಕ್ಷಿತಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.
ತೆಲುಗಿನ ಪುರಿ ಜಗನಾಥ್ ನಿರ್ದೇಶಿಸಿದ್ದ ಈ ಚಿತ್ರ ಆಗಿನ ಕಾಲದಲ್ಲಿ ಅದು ಬ್ಲಾಕ್ ಬಸ್ಟರ್ ಆಗಿತ್ತು. ರಕ್ಷಿತಾ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಸಿನಿಮಾದ ಹಾಡುಗಳು ಕೂಡ ಯಶಸ್ಸು ಕಂಡಿದ್ದವು. ಗುರು ಕಿರಣ್ ಮ್ಯೂಸಿಕ್ ಗಮನ ಸೆಳೆದಿತ್ತು.