Chikkanna ; ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ಸಿನಿಮಾದಲ್ಲಿ ಚಿಕ್ಕಣ್ಣ; ಉಪಾಧ್ಯಕ್ಷನ ಬಿಗ್‌ ಬಜೆಟ್‌ ಮೂವಿ ಇದು

Chikkanna-Somashekar-Kattigenahalli

ನಾಯಕ ನಟನಾಗಿ ಪ್ರಮೋಷನ್‌ ಪಡೆದ ಚಿಕ್ಕಣ್ಣ, ಈಗ ಮತ್ತೊಂದು ಸಿನಿಮಾದಲ್ಲಿ ಹೀರೋ ಆಗಿ ಮಿಂಚಲಿದ್ದಾರೆ. ಕಳೆದ ವರ್ಷ (2024) ಉಪಾಧ್ಯಕ್ಷ ಮೂಲಕ ಯಶಸ್ಸನ್ನು ಗಳಿಸಿದ ಚಿಕ್ಕಣ್ಣ (Chikkanna), ಮುಂದಿನ ಸಿನಿಮಾದ ಸ್ಕ್ರಿಪ್ಟ್‌ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಈಗ ಮತ್ತೊಂದು ಕಥೆಗೆ ನಾಯಕನಾಗಿ ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ.

ಈ ಹಿಂದೆ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ (Somashekar Kattigenahalli) ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಕಥೆ ಬರೆದಿದ್ದು, ನಿರ್ಮಾಪಕರು ಶೀಘ್ರದಲ್ಲೇ ತಾಂತ್ರಿಕ ತಂಡವನ್ನು ಅಂತಿಮಗೊಳಿಸಲಿದ್ದಾರೆ.

‘ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಚಿಕ್ಕಣ್ಣಗೆ ಸೂಕ್ತವಾಗುವ ಹಾಸ್ಯಮಯ ಕಥೆಯನ್ನು ಹೊಂದಿದೆ. ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಸಿನಿಮಾ ಸೆಟ್ಟೇರಲಿದೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ’ ಎಂದಿದ್ದಾರೆ ನಿರ್ಮಾಪಕರು.

‘ಇದು ನನ್ನ ಮೊದಲ ಬಿಗ್ ಬಜೆಟ್ ಚಿತ್ರವಾಗಲಿದೆ. ಪಾತ್ರಕ್ಕೆ ಉತ್ತಮ ಮೌಲ್ಯ ಇಲ್ಲದ ಹೊರತು ಎಲ್ಲ ಪಾತ್ರಗಳಲ್ಲಿ ನಾನು ನಟಿಸುವುದಿಲ್ಲ. ಆದರೆ ಇದೀಗ, ನನ್ನ ಮುಂದೆ ಕೆಲವು ಯೋಜನೆಗಳಿವೆ. ಅವುಗಳತ್ತ ಗಮನ ಹರಿಸುತ್ತೇನೆ. ನಾನು ಇನ್ನೂ ಹೀರೋ ಆಗುವ ಹಂಬಲದಲ್ಲೇ ಇದ್ದೇನೆ’ ಎನ್ನುತ್ತಾರೆ ಚಿಕ್ಕಣ್ಣ.

Leave a Reply

Your email address will not be published. Required fields are marked *