Shyam Benegal; ಲಾಸ್ ಏಂಜಲೀಸ್‌ ಸಿನಿಮೋತ್ಸವಕ್ಕೆ ಶ್ಯಾಮ್‌ ಬೆನಗಲ್‌ ನಿರ್ದೇಶನದ ‘ಮಂಥನ್‌’ ಆಯ್ಕೆ

Manthan-Shyam-Benegal

ಬೆಂಗಳೂರು: ಅಮೆರಿಕದ ಲಾಸ್‌ ಏಂಜಲೀಸ್‌ನ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಶ್ಯಾಮ್‌ ಬೆನಗಲ್‌ ನಿರ್ದೇಶನದ ‘ಮಂಥನ್‌’ ಸಿನಿಮಾವು ಪ್ರದರ್ಶನವಾಗಲಿದೆ. ಭಾರತದ ಪ್ರಮುಖ 12 ಸಿನಿಮಾಗಳು ‘ಬಣ್ಣದಲ್ಲಿ ಭಾವಪರವಶತೆ: ಭಾರತೀಯ ವೈವಿಧ್ಯಮಯ ಸಿನಿಮಾ’ ಎಂಬ ವಿಭಾಗದಡಿ ಪ್ರದರ್ಶನವಾಗುತ್ತಿದ್ದು, ಇದರಲ್ಲಿ ಮಾರ್ಚ್‌ 10ರಂದು ‘ಮಂಥನ್‌’ ಪ್ರದರ್ಶನಗೊಳ್ಳಲಿದೆ.

ಮಂಥನ್‌ ಜಗತ್ತಿನ ಮೊದಲ ಕ್ರೌಡ್‌ಫಂಡಿಂಗ್‌ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ. ಸ್ಮಿತಾ ಪಾಟೀಲ್‌, ನಾಸಿರುದ್ದೀನ್ ಶಾ, ಗಿರೀಶ್ ಕಾರ್ನಾಡ್‌, ಅಮರೀಶ್ ಪುರಿ ಅವರು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಕಥೆ ಕ್ಷೀರ ಕ್ರಾಂತಿ ಮತ್ತು ವರ್ಗೀಸ್ ಕುರಿಯನ್ ಅವರಿಂದ ಪ್ರೇರಿತಗೊಂಡಿದೆ.

ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್‌) ಐದು ಲಕ್ಷ ರೈತರಿಂದ ತಲಾ ₹2 ಸಂಗ್ರಹಿಸಿ ಸಿನಿಮಾಕ್ಕೆ ಬಜೆಟ್‌ ಹೊಂದಿಸಿತ್ತು. ಈ ಸಿನಿಮಾವನ್ನು 10 ಲಕ್ಷ ಬಜೆಟ್‌ನಲ್ಲಿ ಮಾಡಲಾಗಿದೆ.

Leave a Reply

Your email address will not be published. Required fields are marked *