Nam Gani B Com Pass 2; ಚಿತ್ರೀಕರಣದಲ್ಲಿ ʻಪಾಸ್‌ʼ ಆದ ಅಭಿಷೇಕ್ ಶೆಟ್ಟಿ

Nam Gani B Com Pass 2

ಸ್ಯಾಂಡಲ್‌ವುಡ್‌ನಲ್ಲೀಗ ಪ್ರೀಕ್ವೆಲ್‌ ಮತ್ತು ಸೀಕ್ವೇಲ್‌ಗಳ ಕಾಲ. ಜನ ಮೆಚ್ಚುಗೆ ಪಡೆದ ಸಿನಿಮಾಗಳ ಮುಂದುವರೆದ ಭಾಗಗಳು ತೆರೆಗೆ ಬರುತ್ತಿದೆ. ಅಭಿಷೇಕ್ ಶೆಟ್ಟಿ ಕೂಡ ತಮ್ಮ ಸಿನಿಮಾ ಗಣಿ ಬಿ. ಕಾಂ ಪಾಸ್ ಸ್ವೀಕ್ವೇಲ್‌ ಮಾಡುತ್ತಿದ್ದಾರೆ. ಇದು ಅವರ ಜನ್ಮದಿನದಂದು ಅನೌನ್ಸ್‌ ಮಾಡಿದ್ದರು. ಈಗ ಬಂದಿರು ಹೊಸ ಅಪ್ಡೇಟ್‌ ಏನಂದ್ರೆ, ಚಿತ್ರೀಕರಣ ಮುಗಿಸಿದ್ದಾರೆ ಅಂತ.

Nam Gani B Com Pass 2
Nam Gani B Com Pass 2

ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್ ವುಡ್​ಗೆ ಹೆಜ್ಜೆ ಇಟ್ಟವರು ಅಭಿಷೇಕ್ ಶೆಟ್ಟಿ. ಮೊದಲ ಚಿತ್ರದಲ್ಲಿಯೇ ಗಮನಸೆಳೆದ ಅಭಿಷೇಕ್​ ನಂತರ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡರು. ಅನೀಶ್​​ ಅವರಿಗೆ ʻಆರಾಮ್ ಅರವಿಂದ್ ಸ್ವಾಮಿʼ ಸಿನಿಮಾ ಮಾಡಿ ಪ್ರೇಕ್ಷಕರ ಮನ ಗೆದ್ದರು. ಅದಾದ ನಂತರ ಅಭಿಷೇಕ್‌ ಗಣಿ B.com ಪಾಸ್‌ ಚಿತ್ರದ ಮುಂದುವರೆದ ಭಾಗಕ್ಕೆ ಕೈಹಾಕಿದ್ದರು.

“ನಮ್ ಗಣಿ ಬಿ.ಕಾಂ ಪಾಸ್” ಚಿತ್ರವು 2019ರಲ್ಲಿ ತೆರೆ ಕಂಡು ಕೌಟುಂಬಿಕ ಪ್ರೇಕ್ಷಕರ ಗಮನ‌ ಸೆಳೆದಿತ್ತು. ಹಾಗಾಗಿ ಅದರ ಮುಂದಿನ‌ಭಾಗದ ಬಗ್ಗೆ ಅನೌನ್ಸ್‌ ಆದಾಗಿನಿಂದ ಸಿನಿ‌ಪ್ರೇಕ್ಷಕರಲ್ಲಿ ಒಂದು ಕುತೂಹಲ ಮನೆಮಾಡಿದೆ. “ಗಣಿ ಬಿ ಕಾಂ ಪಾಸ್ 2” ಒಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಹಲವಾರು ಭಾವನೆಗಳನ್ನು,‌ ಕೌಟುಂಬಿಕ ಮೌಲ್ಯಗಳನ್ನು ಕಥೆಯಲ್ಲಿ ನಿರ್ದೇಶಕರು ಹೇಳಿದ್ದಾರೆ. ಸಧ್ಯ ಚಿತ್ರೀಕರಣ ಮುಗಿಸಿರುವ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ. ನಿರ್ದೇಶಕ ಕಂ. ನಟ ಅಭಿಷೇಕ್‌ ಶೀಘ್ರವೇ ತೆರೆಗೆ ಬರಲಿದೆ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

“ಗಣಿ ಬಿ. ಕಾಂ ಪಾಸ್ 2” ಸಿನಿಮಾದಲ್ಲಿ ಹೃತಿಕಾ ಶ್ರೀನಿವಾಸ್, ದಿವ್ಯಾ ಸುರೇಶ್, ಸುಧಾ‌ ಬೆಳವಾಡಿ,‌ ಜಹಂಗೀರ್, ರಾಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ಇದೆ. ಈ ಚಿತ್ರವನ್ನು ಬಿ.ಎಸ್‌ ಪ್ರಶಾಂತ್ ಶೆಟ್ಟಿ ಮತ್ತು ಪ್ರಶಾಂತ್ ರೆಡ್ಡಿ ಅದ್ವಿ ಕ್ರಿಯೇಷನ್ಸ್ ಹಾಗೂ 786 ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ‌.

This error message is only visible to WordPress admins

Error: No feed found.

Please go to the Instagram Feed settings page to create a feed.

This error message is only visible to WordPress admins

Error: No feed found.

Please go to the Instagram Feed settings page to create a feed.

Leave a Reply

Your email address will not be published. Required fields are marked *