71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದಲ್ಲಿ ‘kandeelu’ ಅತ್ಯುತ್ತಮ ಚಿತ್ರ

Kandeelu

ಕಳೆದ ವರ್ಷ 2022ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಅತ್ಯುತ್ತಮ ನಟ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಸೇರಿದಂತೆ ಒಟ್ಟು ಏಳು ಪ್ರಶಸ್ತಿಗಳು ಸಿಕ್ಕಿತ್ತು. ಆದರೆ, ಈ ಬಾರಿ ಕೇವಲ ಎರಡು ಪ್ರಶಸ್ತಿಗಳು ಸಿಕ್ಕಿತ್ತು. ಆದರೆ, ಈ ಬಾರಿ ಸಾಕಷ್ಟು ಕುಸಿತ ಕಂಡಿದೆ.

ಶುಕ್ರವಾರ ಸಂಜೆ, 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದ್ದು, 2023ನೇ ಸಾಲಿನ ಪ್ರಶಸ್ತಿಯಲ್ಲಿ ಫೀಚರ್ ಫಿಲಂನ ಪ್ರಾದೇಶಿಕ ವಿಭಾಗದಲ್ಲಿ ‘ಕಂದೀಲು’ ಹಾಗೂ ನಾನ್ ಫೀಚರ್ ವಿಭಾಗದಲ್ಲಿ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ ಕಿರುಚಿತ್ರಕ್ಕೆ ಪ್ರಶಸ್ತಿಗಳು ದೊರಕಿವೆ.

‘ಕಂದೀಲು’ (Kandeelu) ಒಂದು ಪುಟ್ಟ ಕಥೆಯಾಗಿದ್ದು, ಈ ಚಿತ್ರವನ್ನು ಯಶೋದಾ ಪ್ರಕಾಶ್‍ ಕೊಟ್ಟುಕತ್ತಿರಾ ನಿರ್ಮಿಸಿ-ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಬ್ರಹ್ಮಾವರ, ವನಿತಾ ರಾಜೇಶ್‍, ಗುರು ತೇಜಸ್‍, ವೆಂಕಟೇಶ್‍ ಪ್ರಸಾದ್‍ ಮುಂತಾದವರು ನಟಿಸಿದ್ದಾರೆ.

ಸಇನ್ನು, ಕೆ ಮೈಸೂರು ಮೂಲದ ಚಿದಾನಂದ ಎಸ್‍. ನಾಯ್ಕ್ ನಿರ್ದೇಶನದ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ (Sunflowers were the first ones to know) ಎಂಬ ಕನ್ನಡದ ಕಿರುಚಿತ್ರಕ್ಕೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಕ್ಯಾನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿತ್ತು. ಆ ನಂತರ 2025ರ ಆಸ್ಕರ್ ಪ್ರಶಸ್ತಿಗೆ ಈ ಚಿತ್ರವು ಅರ್ಹತೆ ಪಡೆದಿತ್ತು.

ನಾನ್ ಫೀಚರ್ ಹಾಗೂ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ‘ಕಂದೀಲು’ ಹಾಗೂ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ ಕಿರುಚಿತ್ರಕ್ಕೆ ರಜತ ಕಮಲ ಹಾಗೂ ಎರಡು ಲಕ್ಷ ನಗದು ಸಿಗಲಿದೆ.

ಈ ಬಾರಿ ಫೀಚರ್ ಚಿತ್ರ ವಿಭಾಗದಲ್ಲಿ ಒಟ್ಟು ನಾಲ್ಕು ಕನ್ನಡ ಚಿತ್ರಗಳು ಕೊನೆಯ ಸುತ್ತಿನವರೆಗೂ ಬಂದಿತ್ತು ಎಂದು ಹೇಳಲಾಗುತ್ತಿದೆ. ಹೇಮಂತ್‍ ರಾವ್ ‍ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’, ಯಶೋಧ ಪ್ರಕಾಶ್ ಕೊಟ್ಟುಕತ್ತೀರ ನಿರ್ದೇಶನದ ‘ಕಂದೀಲು’,  ನಾಗಿಣಿ ಭರಣ ನಿರ್ದೇಶನದ ‘ಜೀನಿಯಸ್ ಮುತ್ತಾ’ ಹಾಗೂ ಬಡಿಗೇರ್ ದೇವೇಂದ್ರ ನಿರ್ದೇಶನದ ‘ಇನ್‍’ ಚಿತ್ರಗಳು ಸ್ಪರ್ಧೆಯಲ್ಲಿದ್ದು, ಈ ಪೈಕಿ ‘ಕಂದೀಲು’ ಮಾತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-



ಲೇಟೆಸ್ಟ್‌ ಸುದ್ದಿಗಳು :-

One thought on “71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದಲ್ಲಿ ‘kandeelu’ ಅತ್ಯುತ್ತಮ ಚಿತ್ರ

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!