`666 Operation Dream Theatreʼನಲ್ಲಿ ಹೀಗೆ ಕಾಣ್ತಾರೆ ಶಿವಣ್ಣ …

Shiva RajKumar

ಹೇಮಂತ್ ರಾವ್‍ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಧನಂಜಯ್‍ ಅವರ ಮೊದಲ ನೋಟ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಇನ್ನೆರಡು ದಿನಗಳಲ್ಲಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಬ್ಬದ ಉಡುಗೊರೆಯಾಗಿ ಅವರ ಮೊದಲ ನೋಟದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

‘666 Operation Dream Theatre’ನಲ್ಲಿ ಶಿವಣ್ಣ ರೆಟ್ರೋ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್‌ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್‌ ಹಿಡಿದು ತೀಕ್ಷ ನೋಟದೊಂದಿಗೆ ಹೆಜ್ಜೆ ಹಾಕುತ್ತಾ ಸ್ಟೈಲೀಶ್‌ ಆಗಿ ಕಾಣಿಸುತ್ತಾರೆ. ಅವರ ಪಾತ್ರವು ಡಾ. ರಾಜಕುಮಾರ್‍ ಅವರ ಬಾಂಡ್‍ ಪಾತ್ರಗಳನ್ನು ನೆನಪಿಸುತ್ತದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇದಕ್ಕೂ ಮೊದಲು ಹೇಮಂತ್‍ ರಾವ್‍ ನಿರ್ದೇಶನದಲ್ಲಿ ‘ಭೈರವನ ಕೊನೆಯ ಪಾಠ’ ಎಂಬ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸಬೇಕಿತ್ತು. ಈ ಚಿತ್ರದ ಫೋಟೋಶೂಟ್‍ ಆಗಿ ಚಿತ್ರೀಕರಣ ಸಹ ಶುರುವಾಗಬೇಕಿತ್ತು. ಆದರೆ, ಶಿವರಾಜಕುಮಾರ್‌ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ‘666 ಆಪರೇಷನ್ ಡ್ರೀಮ್ ಥಿಯೇಟರ್‌’ ಪ್ರಾರಂಭವಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ಧನಂಜಯ್‍ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಮೊದಲ ನೋಟ ಇತ್ತೀಚೆಗೆ ಬಿಡುಗಡೆಯಾಗಿದೆ.

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಗೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಹಾಗೂ ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸವಿದೆ.

ಇದನ್ನೂ ಓದಿ:-

2 thoughts on “`666 Operation Dream Theatreʼನಲ್ಲಿ ಹೀಗೆ ಕಾಣ್ತಾರೆ ಶಿವಣ್ಣ …

Leave a Reply

Your email address will not be published. Required fields are marked *

ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ ಮಗಳ ಜೊತೆ ಮಿಲನಾ ನಾಗರಾಜ್‌