‘666 Operation Dream Theatre’ನಲ್ಲಿ ಧನಂಜಯ್…

ಶಿವರಾಜಕುಮಾರ್ ಅಭಿನಯದಲ್ಲಿ ‘ಭೈರವನ ಕೊನೆಯ ಪಾಠ’ ಎಂಬ ಚಿತ್ರವನ್ನು ಕಳೆದ ವರ್ಷ ಘೋಷಿಸಿದ್ದರು ನಿರ್ದೇಶಕ ಹೇಮಂತ್ ರಾವ್. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಈ ವರ್ಷ ಪ್ರಾರಂಭವಾಗಬೇಕಿತ್ತು. ಆದರೆ, ಶಿವರಾಜಕುಮರ್ ಅವರ ಅನಾರೋಗ್ಯದಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಇನ್ನೊಂದು ಹೊಸ ಚಿತ್ರವನ್ನು ಹೇಮಂತ್ ಘೋಷಿಸಿದ್ದಾರೆ.
ಈ ಚಿತ್ರದಲ್ಲೂ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಆದರೆ, ವಿಶೇಷ ಪಾತ್ರದಲ್ಲಿ. ಈ ಚಿತ್ರದಲ್ಲಿ ನಾಯಕನಾಗಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದು, ಶಿವರಾಜಕುಮಾರ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು ‘666 ಆಪರೇಷನ್ ಡ್ರೀಮ್ ಥಿಯೇಟರ್’ (666 operation dream theatre).

ಈ ಚಿತ್ರವನ್ನು ಇಂದು ಅಧಿಕೃತವಾಗಿ ಘೋಷಿಸಲಾಗಿದೆ. ಶಿವರಾಜಕುಮಾರ್ ಅಭಿನಯದ ಮೊದಲ ಚಿತ್ರ ‘ಆನಂದ್’ ಬಿಡುಗಡೆಯಾಗಿ ಇಂದು 39 ವರ್ಷ ಮುಗಿದು, 40ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಚಿತ್ರವನ್ನು ಘೋಷಿಸಿದ್ದಾರೆ ಹೇಮಂತ್ ರಾವ್.
ಈ ಚಿತ್ರವನ್ನು ಡಾ. ವೈಶಾಖ್ ಜೆ. ಗೌಡ ಅವರು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ. ಇದಕ್ಕೂ ಮೊದಲು ‘ಭೈರವನ ಕೊನೆಯ ಪಾಠ’ ಚಿತ್ರವನ್ನು ವೈಶಾಖ್ ನಿರ್ಮಿಸಬೇಕಿತ್ತು. ಆ ಚಿತ್ರ ಮುಂದಕ್ಕೆ ಹೋದ ಕಾರಣ, ಈ ಚಿತ್ರವನ್ನು ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರವನ್ನಾಗಿ ಅವರು ಕೈಗೆತ್ತಿಕೊಂಡಿದ್ದಾರೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಹೇಮಂತ್ ಇನ್ನೂ ಬಹಿರಂಗಗೊಳಿಸಿಲ್ಲ. ಸದ್ಯಕ್ಕೆ, ಧನಂಜಯ್ ಮತ್ತು ಶಿವರಾಜಕುಮಾರ್ ಮಾತ್ರ ನಟಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಮಿಕ್ಕ ಕಲಾವಿದರ ಆಯ್ಕೆ ನಡೆಯುತ್ತಿದೆ.
ಇನ್ನು, ಹೇಮಂತ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆದಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] ವಿಜಯ್ ಹುಟ್ಟುಹಬ್ಬಕ್ಕೆ Jana Nayagan ಟೀಸರ್ ಬಿಡ… […]
[…] ವಿಜಯ್ ಹುಟ್ಟುಹಬ್ಬಕ್ಕೆ Jana Nayagan ಟೀಸರ್ ಬಿಡ… […]
[…] ವಿಷ್ಣುವರ್ಧನ್ ನೆನಪಲ್ಲಿ ಎರಡು ದಿನಗಳ ‘ಯಜ… […]
[…] ವಿಷ್ಣುವರ್ಧನ್ ನೆನಪಲ್ಲಿ ಎರಡು ದಿನಗಳ ‘ಯಜಮಾನರ ಅಮೃತ ಮಹೋತ್ಸವ’ […]
[…] ‘Alpha Men Love Violence’ ಜೊತೆಗೆ ಬಂದ ವಿಜಯ್ ನಾಗೇಂದ್ರ […]
One thought on “‘666 Operation Dream Theatre’ನಲ್ಲಿ ಧನಂಜಯ್…”