Karnataka State Film Award; ‘ಜಂಟಲ್‍ಮ್ಯಾನ್‍’, ‘ಪಿಂಕಿ ಎಲ್ಲಿ’ ಚಿತ್ರಗಳಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಪ್ರಜ್ವಲ್, ಅಕ್ಷತಾ

ಕನ್ನಡದ ಜನಪ್ರಿಯ ನಟ ದೇವರಾಜ್ ಇದುವರೆಗೂ ಹಲವು ಚಿತ್ರಗಳಲ್ಲಿ ಹೀರೋ, ವಿಲನ್‍ ಆಗಿ ನಟಿಸಿದ್ದಾರೆ. ಆದರೆ, ಇದುವರೆಗೂ ಅವರಿಗೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ. ಈಗ ಅವರ ಮಗ ಪಜ್ವಲ್‍ಗೆ ರಾಜ್ಯ ಸರ್ಕಾರದಿಂದ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

2020ನೇ ಸಾಲಿನ ರಾಜ್ಯ ಪ್ರಶಸ್ತಿಗಳು (Karnataka State Film Award)‌ ಘೋಷಣೆಯಾಗಿದ್ದು, ‘ಜೆಂಟಲ್‍ಮ್ಯಾನ್‍’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಅವರಿಗೆ ಅತ್ಯುತ್ತಮ ನಟ ಮತ್ತು ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

2020ನೇ ಸಾಲಿನ ಪ್ರಶಸ್ತಿ ಕಣದಲ್ಲಿ ಈ ಬಾರಿ ಒಟ್ಟು 66 ಚಿತ್ರಗಳು ಇದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್‍. ಲಿಂಗದೇವರು ನೇತೃತ್ವದ ಆಯ್ಕೆ ಸಮಿತಿಯು ಚಿತ್ರಗಳನ್ನು ವೀಕ್ಷಿಸಿ, ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಮೊದಲ ಮೂರು ಅತ್ಯುತ್ತಮ ಚಿತ್ರಗಳ ಜೊತೆಗೆ ‘ಗಿಳಿಯು ಪಂಜರದೊಳಿಲ್ಲ’ ಮತ್ತು ‘ಈ ಮಣ್ಣು’ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಕ್ಕೆ ಆಯ್ಕೆಯಾದರೆ, ‘ಫೋರ್‌ ವಾಲ್ಸ್’ ಚಿತ್ರವು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿದೆ. ‘ಪದಕ’ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆದರೆ, ತುಳು ಚಿತ್ರ ‘ಜೀಟಿಗೆ’ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಬಾರಿ ಎರಡು ಚಿತ್ರಗಳು ತಲಾ ಎರಡು ಪ್ರಶಸ್ತಿಗಳನ್ನು ಪಡೆದರೆ, ಒಂದು ಚಿತ್ರವು ಮೂರು ಪ್ರಶಸ್ತಿಯನ್ನು ಪಡೆದಿದೆ. ‘ಪಿಂಕಿ ಎಲ್ಲಿ’ ಚಿತ್ರವು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟಿ ಪಡೆದರೆ, ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಸಿಕ್ಕಿವೆ. ‘ದಂತ ಪುರಾಣ’ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಗಾಯಕಿ ಮತ್ತು ಬಾಲನಟ ಪ್ರಶಸ್ತಿ ಲಭಿಸಿದೆ.

ಈ ವರ್ಷ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ನಟ ಸಂಚಾರಿ ವಿಜಯ್‍ ಅವರಿಗೆ ನಟನೆಗಾಗಿ ಮರಣೋತ್ತರವಾಗಿ ಪ್ರಶಸ್ತಿ ನೀಡಿದರೆ, ‘ಸಾರವಜ್ರ’ದ ವಸ್ತ್ರ ವಿನ್ಯಾಸಕ್ಕಾಗಿ ಶ್ರೀವಲ್ಲಿ, ‘ತಲೆದಂಡ’ ಚಿತ್ರದ ಪ್ರಸಾಧನಕ್ಕಾಗಿ ರಮೇಶ್‍ ಬಾಬು ಮತ್ತು ಅಮೃತ್‍ ಅಪಾರ್ಟ್‍ಮೆಂಟ್ಸ್ ಚಿತ್ರದ ಶಬ್ಧಗ್ರಹಣಕ್ಕಾಗಿ ವಿ.ಜಿ. ರಾಜನ್ ಅವರಿಗೆ ನೀಡಲಾಗಿದೆ.

ಉಳಿದ ಪ್ರಶಸ್ತಿ ಮತ್ತು ವಿಜೇತರ ಪಟ್ಟಿ ಹೀಗಿದೆ:

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ (ಗಣೇಶ್‍ ಹೆಗ್ಡೆ)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಜೀಟಿಗೆ (ತುಳು ಭಾಷೆ)

ಅತ್ಯುತ್ತಮ ನಟ: ಪ್ರಜ್ವಲ್‍ ದೇವರಾಜ್‍

ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ

ಅತ್ಯುತ್ತಮ ಪೋಷಕ ನಟ: ರಮೇಶ್‍ ಪಂಡಿತ್‍ (ತಲೆದಂಡ)

ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)

ಅತ್ಯುತ್ತಮ ಕಥೆ: ಶಶಿಕಾಂತ್‍ ಗಟ್ಟಿ (ರಾಂಚಿ)

ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್‌ (ಚಾಂದಿನಿ ಬಾರ್‌)

ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)

ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್‍ (ತಲೆದಂಡ)

ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್‍ ಬಡೇರಿಯಾ (ಮಾಲ್ಗುಡಿ ಡೇಸ್‍)

ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. ಉಜ್ಜನಿ (ಆ್ಯಕ್ಟ್ 1978)

ಅತ್ಯುತ್ತಮ ಬಾಲನಟ: ಅಹಿಲ್‍ ಅನ್ಸಾರಿ (ದಂತ ಪುರಾಣ)

ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್‌ (ಪಾರು)

ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ಬಿಚ್ಚುಗತ್ತಿ)

ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್‍ ಶೆಟ್ಟಿ ಕುಂಬ್ಳೆ (‘ಇ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’

ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್‍ (ನಟನೆಗಾಗಿ – ಮರಣೋತ್ತರವಾಗಿ), ಶ್ರೀ ವಲ್ಲಿ (ವಸ್ತ್ರ ವಿನ್ಯಾಸ – ‘ಸಾರವಜ್ರ’), ರಮೇಶ್‍ ಬಾಬು (ಪ್ರಸಾಧನ – ‘ತಲೆದಂಡ’) ಮತ್ತು ವಿ.ಜಿ. ರಾಜನ್ (ಶಬ್ಧಗ್ರಹಣ – ಅಮೃತ್‍ ಅಪಾರ್ಟ್‍ಮೆಂಟ್ಸ್)

ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್‍ ಕೆ.ಎಸ್ (ವಿಶೇಷಚೇತನ ನಟ – ಅರಬ್ಬೀ)

(Karnataka State Film Awards for the year 2020 is out with Prajwal Devaraj and Akshatha Pandavapura as Best Actor and Actress for Gentleman and Pinki Elli? respectively. Pinki Elli?, directed by Prithvi Konanur, won Best Film. The selection committee, led by B.S. Lingadevaru, also posthumously awarded Sanchari Vijay a Special Jury Award for acting.)

Leave a Reply

Your email address will not be published. Required fields are marked *