Bengaluru International Film Festival (BIFFes); ಮಿಕ್ಕ ಬಣ್ಣದ ಹಕ್ಕಿ ಅತ್ಯುತ್ತಮ ಚಿತ್ರ; ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆ

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ (Bengaluru International Film Festival (BIFFes)) ದಲ್ಲಿ ಮನೋಹರ ಕೆ‌. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ ‘ಮಿಕ್ಕ ಬಣ್ಣದ ಹಕ್ಕಿ’ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ತುಳು ಚಿತ್ರಗಳಾದ ಸಂತೋಷ್ ಮಾಡ ನಿರ್ದೇಶನದ, ಸುರೇಶ್‌ ಕೆ. ನಿರ್ಮಾಣದ ‘ಪಿದಾಯಿ’ ಹಾಗೂ ಅನೀಶ್‌ ಪೂಜಾರಿ ನಿರ್ದೇಶನದ, ರಾಘವೇಂದ್ರ ಕೆ. ನಿರ್ಮಾಣದ ‘ದಸ್ಕತ್’ ಸಿನಿಮಾಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. ಪ್ರಶಸ್ತಿ ಗೆದ್ದ…

Read More

Duniya Vijay; ನಯನತಾರಾ ಎದುರು ವಿಲನ್‍ ಆದ ‘ದುನಿಯಾ’ ವಿಜಯ್‍; ತಮಿಳು ಚಿತ್ರದಲ್ಲಿ ನಟನೆ

ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಬ್ಯುಸಿಯಾಗಿರುವ ನಟ ಎಂದರೆ ಅದು ‘ದುನಿಯಾ’ ವಿಜಯ್‍. ಸದ್ಯ ಅವರು, ‘ಲ್ಯಾಂಡ್‍ ಲಾರ್ಡ್‍’ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಇನ್ನಷ್ಟೇ ಮುಗಿಯಬೇಕಿದೆ. ಇದರ ಜೊತೆಗೆ ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿನಯ್‍ ರಾಜಕುಮಾರ್‍ ಮತ್ತು ವಿಜಯ್‍ ಮಗಳು ಮೊನೀಷಾ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ವಿಜಯ್‍ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ, ವಿಜಯ್‍ ಈ ಬಾರಿ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ…

Read More

Karnataka Buget 2025: ಆಯ-ವ್ಯಯದಲ್ಲಿ ಸಿನಿಮಾಕ್ಕೆ ಸಿಕ್ಕಿದ್ದೆಷ್ಟು?

ಬೆಂಗಳೂರು: ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಈ ಬಾರಿಯ ಬಜೆಟ್‌ನಲ್ಲಿ ಚಲನ ಚಿತ್ರ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಸರ್ಕಾರ ಘೋಷಿಸಿದೆ. (Karnataka Buget 2025) ರಾಜ್ಯದ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರವನ್ನು ₹200ಕ್ಕೆ ಸೀಮಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಚಯವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ….

Read More

Arjun Sarja; ತ್ರಿಭಾಷೆಯಲ್ಲಿ ಸೀತಾ ಪಯಣ; ನಿರ್ದೇಶನದ ಜೊತೆ ನಿರ್ಮಾಣಕ್ಕೂ ಕೈಹಾಕಿದ ಅರ್ಜುನ್‌ ಸರ್ಜಾ

ಅರ್ಜುನ್‌ ಸರ್ಜಾ (Arjun Sarja) ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಮಗಳು ಐಶ್ವರ್ಯ ಸರ್ಜಾ ಅಭಿನಯದ ‘ಸೀತಾ ಪಯಣ’ (Seetha Payana) ಚಿತ್ರದ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ (Niranjan) ನಾಯಕ ನಾಟಕನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‘ಜೈ ಹಿಂದ್’, ‘ಅಭಿಮನ್ಯು’ ಮತ್ತು ‘ಪ್ರೇಮಬರಹ’ ಸಿನಿಮಾಗಳನ್ನು ಅರ್ಜುನ್‌ ಸರ್ಜಾ ನಿರ್ದೇಶನ ಮಾಡಿದ್ದರು. ‘ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪಯಣ ಕುರಿತಾದ ಚಿತ್ರವಾಗಿದ್ದು, ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವಿದೆ….

Read More