
ಹೊಸ ವರ್ಷಕ್ಕೆ ಗಣೇಶ್ ಅಭಿನಯದ ಹೊಸ ಚಿತ್ರದ ಟೀಸರ್…
ಗಣೇಶ್ ಅಭಿನಯದ ಹಿಂದಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಹೀಗಿರುವಾಗಲೇ, ಈ ವರ್ಷ ಬಿಡುಗಡೆಯಾದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ನಾಲ್ಕು ಕೇಂದ್ರಗಳಲ್ಲಿ 100 ದಿನಗಳನ್ನು ಪೂರೈಸಿದೆ. ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು 100 ದಿನ ಪೂರೈಸಿದ ಹೆಗ್ಗಳಿಕೆ ಪಾತ್ರವಾಗಿದೆ. ಈ ಮಧ್ಯೆ, ಗಣೇಶ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಟೀಸರ್ ಹೊಸ ವರ್ಷದ ಸಂದರ್ಭದಲ್ಲಿ 2025ರ ಜನವರಿ ಎರಡರಂದು ಬಿಡುಗಡೆಯಾಗಲಿದೆ. ಅಂದು ಚಿತ್ರದ ಶೀರ್ಷಿಕೆಯನ್ನು ಟೀಸರ್ ಮೂಲಕ ಅಧಿಕೃತವಾಗಿ ಘೋಷಿಸಲಾಗುತ್ತದೆ. ವಿಶೇಷವೆಂದರೆ, ತೆಲುಗಿನ…