Marco-Unni-Mukundan

Marco: ಕನ್ನಡದಲ್ಲಿ ಬರ್ತಿದೆ ಮಾರ್ಕೊ; ಕನ್ನಡದಲ್ಲೇ ಪೋಸ್ಟ್ ಮಾಡಿ ಸುದ್ದಿ ತಿಳಿಸಿದ ಉನ್ನಿ ಮುಕುಂದನ್

ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan) ಅವರ ಮಾರ್ಕೊ ಸಿನಿಮಾ ಕನ್ನಡಕ್ಕೆ ಬರುತ್ತಿದೆ. ಈಗಾಗಲೇ ಯಾವುದೇ ಭಾರೀ ಪ್ರಚಾರ ಇಲ್ಲದೇ ಕೇವಲ ಬಾಯಿಮಾತಿನ ಮೂಲಕ ಮಾರ್ಕೊ ಯಶಸ್ಸು ಗಳಿಸಿದೆ. ಈ ಚಿತ್ರ 100 ಕೋಟಿ ಕ್ಲಬ್ ಕೂಡಾ ಸೇರಿದೆ. ಮಾರ್ಕೊನ ಕನ್ನಡ ಅವತರಣಿಗೆ ಬಿಡುಗಡೆ ಆಗುವುದರ ಬಗ್ಗೆ ಸ್ವತಃ ನಟ ಉನ್ನಿ ಮುಕುಂದನ್‌ ತಮ್ಮ ಸಾಮಾಜಿಕ ಜಾತಲಾಣದಲ್ಲಿ ಕನ್ನಡಲ್ಲೇ ಪೋಸ್ಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ…

Read More
kiccha sudeep

Kiccha Sudeep; ಇದೇ ನನ್ನ ಕೊನೆಯ ಗ್ರಾಂಡ್‍ ಫಿನಾಲೆ: ವಿದಾಯದ ಪೋಸ್ಟ್ ಹಾಕಿದ ಸುದೀಪ್

ಕನ್ನಡ ‘ಬಿಸ್‍ ಬಾಸ್‍’ ಕಾರ್ಯಕ್ರಮದ ಕಳೆದ 11 ಸೀಸನ್‍ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುದೀಪ್‍, ಮುಂದಿನ ವರ್ಷದಿಂದ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜನವರಿ 25 ಮತ್ತು ಜನವರಿ 26 ರಂದು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯಲಿದ್ದು, ಇದು ತಾವು ನಡೆಸಿಕೊಡುತ್ತಿರುವ ಕೊನೆಯ ಗ್ರಾಂಡ್‍ ಫಿನಾಲೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸೋಮವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸುದೀಪ್‍, ‘ಕಳೆದ 11 ಸೀಸನ್‍ಗಳ ಕಾಲ ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು…

Read More
keerthy krishna plays female lead in shreyas manju starrer dildar movie

‘ದಿಲ್‍ದಾರ’ನ ಜೊತೆಯಾದ ಕೀರ್ತಿ ಕೃಷ್ಣ; ಶರಣ್‍ ಕುಟುಂಬದ ಇನ್ನೊಂದು ಪ್ರತಿಭೆ

ಶ್ರೇಯಸ್‍ ಮಂಜು ಅಭಿನಯದ ‘ವಿಷ್ಣು ಪ್ರಿಯಾ’ ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ‘ದಿಲ್‍ದಾರ್‍’ ಎಂಬ ಇನ್ನೊಂದು ಚಿತ್ರದಲ್ಲೂ ಶ್ರೇಯಸ್‍ ನಟಿಸುತ್ತಿದ್ದು, ಈ ಚಿತ್ರಕ್ಕೆ ಅವರಿಗೆ ನಾಯಕಿಯಾಗಿ ಕೀರ್ತಿ ಕೃಷ್ಣ ಆಯ್ಕೆಯಾಗಿದ್ದಾರೆ. ಈ ಕೀರ್ತಿ ಕೃಷ್ಣ ಯಾರು ಎಂಬ ಪ್ರಶ್ನೆ ಸಹಜ. ಕೀರ್ತಿ, ಶರಣ್‍ ಮತ್ತು ಶ್ರುತಿ ಅವರ ಸಂಬಂಧಿ. ಅವರಿಬ್ಬರ ಸಹೋದರಿ ಉಷಾ ಕೃಷ್ಣ ಅವರ ಮಗಳು ಈ ಕೀರ್ತಿ ಕೃಷ್ಣ. ‘ಸಿಂಪಲ್’ ಸುನಿ ಮುಂಬರುವ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ,…

Read More
Natesh-Hegde-Vaghachipani-75th-International-Film-Festival-Berlin-

Vaghachipani; ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ವಾಘಚಿಪಾಣಿ’ ಆಯ್ಕೆ; ಕನ್ನಡಕ್ಕೆ ಇದೇ ಮೊದಲು

ಬೆಂಗಳೂರು: 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ‘ವಾಘಚಿಪಾಣಿ’ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ ‘ವಾಘಚಿಪಾಣಿ’ ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ. ‘ವಾಘಚಿಪಾನಿ’ ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಮೊದಲ ಚಲನಚಿತ್ರ, ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಪೆಡ್ರೋವನ್ನು ರಿಷಭ್ ಶೆಟ್ಟಿ ನಿರ್ಮಿಸಿದ್ದರು. ರಿಷಬ್‌ ಶೆಟ್ಟಿ ನಿರ್ಮಾಣ…

Read More