Dinakar Thoogudeepa, Dinakar Thoogudeepa, Royal

Darshan Thoogudeepa; ಸಹೋದರನ ‘ರಾಯಲ್‍’ ನೋಡಿ ಕಣ್ಣೀರು ಹಾಕಿದ ದರ್ಶನ್‍

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪದಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಇರುವ ದರ್ಶನ್‍ (Darshan Thoogudeepa), ಸಿನಿಮಾದಿಂದ ದೂರವೇ ಇದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ತಮ್ಮ ಸಹೋದರ ದಿನಕರ್‍ ತೂಗುದೀಪ (Dinakar Thoogudeepa) ನಿರ್ದೇಶನದ ‘ರಾಯಲ್‍’ (Royal) ಚಿತ್ರವನ್ನು ಇತ್ತೀಚೆಗೆ ಕುಟುಂಬದವರ ಜೊತೆಗೆ ನೋಡಿದ್ದು, ಕಣ್ಣೀರು ಹಾಕಿದ್ದಾರೆ. ದರ್ಶನ್‍ ಸಹೋದರ ದಿನಕರ್‍ ನಿರ್ದೇಶನದ ‘ರಾಯಲ್‍’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ….

Read More

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪೈಲ್ವಾನ್‌ ಸುದೀಪ ಅತ್ಯುತ್ತಮ ನಟ

ಬೆಂಗಳೂರು : 2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ (Karnataka State Film Awards 2019)ಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್‌ಗೆ (Kiccha Sudeep) ಅತ್ಯತ್ತಮ ನಟ ಹಾಗೂ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ (Anupama Gowda) ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪಿ.ಶೇಷಾದ್ರಿ (P Sheshadri) ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವಿಭಾಗದ ಪ್ರಶಸ್ತಿಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ…

Read More
Landlord, Jadesh Kumar Hampe, Duniya Vijay

ಹೆಸರು ‘ಲ್ಯಾಂಡ್‍ಲಾರ್ಡ್’; ಆದರೆ ಇದು ಬಡವರ ಕಥೆ

‘ದುನಿಯಾ’ ವಿಜಯ್‍ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿದೆ. ನೆಲಮಂಗಲದ ಬಳಿ ಇರುವ ಬರದಿ ಬೆಟ್ಟದಲ್ಲಿ ‘ಲ್ಯಾಂಡ್‍ ಲಾರ್ಡ್’ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಬೆಟ್ಟದ ಕೆಳಗೆ ಜಾತ್ರೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಸೋಮವಾರ ಚಿತ್ರೀಕರಣದ ಸ್ಥಳದಲ್ಲೇ ವಿಜಯ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ‘ಲ್ಯಾಂಡ್‍ ಲಾರ್ಡ್’ ಚಿತ್ರದ ಕುರಿತು ಮಾತನಾಡುವ ವಿಜಯ್‍, ‘ನನಗೆ ಬುದ್ಧಿ ಬಂದಾಗ ನಮ್ಮೂರಲ್ಲಿ ಕರೆಂಟ್‍ ಇರಲಿಲ್ಲ. ಬುಡ್ಡಿದೀಪದಲ್ಲಿ ನಾವೆಲ್ಲರೂ ಓದಿ ಬೆಳೆದವರು. ಜಾತಿ, ಧರ್ಮ ಭೇದ-ಭಾವ ಇಲ್ಲದೆ ಎಲ್ಲರೂ ಒಟ್ಟಿಗೆ…

Read More
Rana, Tharun Sudhir

Tharun Sudhir: ಮತ್ತೆ ಬಂದ ರಾಣ; ತರುಣ್‍ ಸುಧೀರ್ ನಿರ್ಮಾಣದ ಚಿತ್ರಕ್ಕೆ ನಾಯಕ

‘ಏಕ್ ಲವ್‍ ಯಾ’ ಚಿತ್ರದಲ್ಲಿ ನಾಯಕನಾಗಿದ್ದ ರಕ್ಷಿತಾ ಪ್ರೇಮ್‍ ಸಹೋದರ ರಾಣ, ಆ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ವಿಜಯ್‍ ಈಶ್ವರ್ ನಿರ್ದೇಶನದ ಚಿತ್ರವೊಂದರಲ್ಲಿ ಅವರು ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಚಿತ್ರ ಇದುವರೆಗೂ ಶುರುವಾಗಿಲ್ಲ. ಹೀಗಿರುವಾಗಲೇ, ರಾಣ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ರಾಣ, ತರುಣ್‍ ಸುಧೀರ್‍ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಕಾಟೇರ’ ಚಿತ್ರದ ನಂತರ ತರುಣ್‍ ಸುಧೀರ್‍, ಆಟ್ಲಾಂಟ ನಾಗೇಂದ್ರ ಅವರೊಂದಿಗೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಘೋಷಣೆ ಕಳೆದ…

Read More