L2: Empuraan ಚಿತ್ರದ 17 ದೃಶ್ಯಗಳಿಗೆ ಕತ್ತರಿ; ಸದ್ಯದಲ್ಲೇ ಹೊಸ ಅವತರಣಿಕೆ

ಮೋಹನ್‌ ಲಾಲ್ (Mohanlal) ಮತ್ತು ಪೃಥ್ವಿರಾಜ್‍ ಸುಕುಮಾರನ್‍ (prudhvi raj sukumaran) ಅಭಿನಯದ ‘ಎಲ್‌2: ಎಂಪುರಾನ್‍’ (L2: Empuraan) ಚಿತ್ರವು ಬಿಡುಗಡೆಯಾಗಿ, ಮಲಯಾಳಂ ಚಿತ್ರರಂಗದ ಅತೀ ದೊಡ್ಡ ಓಪನಿಂಗ್‍ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್‍ ಸೇರಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಮಾಡಿರುವ ಆಶೀರ್ವಾದ್‍ ಸಿನಿಮಾಸ್‍ ಘೋಷಿಸಿದೆ. ಈ ಮಧ್ಯೆ, ಚಿತ್ರವು ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿ ಗುಜರಾತ್‍ ಗಲಭೆಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಅವಹೇಳನಕಾರಿ ವಿಷಯಗಳಿವೆ ಎಂದು ವಿವಾದ ಶುರುವಾದ ಹಿನ್ನೆಲೆಯಲ್ಲಿ…

Read More

Megastar Chiranjeevi; ಒಂದೂವರೆ ವರ್ಷಗಳ ನಂತರ ಸೆಟ್ಟೇರಿತು ಚಿರಂಜೀವಿ ಹೊಸ ಸಿನಿಮಾ

ಚಿರಂಜೀವಿ (Megastar Chiranjeevi) ಅಭಿನಯದ ಚಿತ್ರವೊಂದು ಸೆಟಟೇರಿ ಒಂದೂವರೆ ವರ್ಷಗಳೇ ಆಗಿವೆ. 2023ರ ಆಗಸ್ಟ್ ತಿಂಗಳಲ್ಲಿ ಅವರ ‘ವಿಶ್ವಂಭರ’ ಚಿತ್ರವು ಸೆಟ್ಟೇರಿತ್ತು. ಆ ಚಿತ್ರ ಈ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕಾರಣಾಂತರಗಳಿಂದ ತಡವಾಗಿ ಚಿತ್ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವನ್ನು ಜುಲೈ 24ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಒಂದು ಪಕ್ಷ ಚಿತ್ರ ಇನ್ನೂ ತಡವಾದರೆ, ಚಿರಂಜೀವಿ ಹುಟ್ಟುಹಬ್ಬದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ….

Read More

KD Hook step Challenge; ಹುಕ್‍ ಸ್ಟೆಪ್‍ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ’ ಹಾಡು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಒಂದು ಹಾಡು ಬಿಡುಗಡೆ ಆದಾಗ, ಅದರ ಚಿತ್ರೀಕರಣ ಸಹ ಮುಗಿದಿರುತ್ತದೆ. ಆದರೆ, ‘ಸೆಟ್‍ ಆಗೋಲ್ಲ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಹುಕ್‍ ಸ್ಟೆಪ್‍ ಮಾಡಿ ಕಳಿಸಿ ಎಂದು ನಿರ್ದೇಶಕ ಪ್ರೇಮ್‍, ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. (KD Hook step Challenge) ‘ಸೆಟ್‍ ಆಗೋಲ್ಲ ಕಣೆ ನಂಗೂ…

Read More

Arjun Janya’s 45 The Movie Teaser; ಕಮರ್ಷಿಯಲ್‍ ಚಿತ್ರದಲ್ಲಿ ತತ್ವ ಹೇಳೋಕೆ ಹೊರಟ ಅರ್ಜುನ್‍; ‘45’ ಟೀಸರ್ ಬಿಡುಗಡೆ

ಸಂಕ್ರಾಂತಿ ಹಬ್ಬಕ್ಕೆ ‘45’ ಚಿತ್ರದ ಒಂದು ಟೀಸರ್ ಬಿಡಗಡೆಯಾಗಿತ್ತು. ಈಗ ಯುಗಾದ ಹಬ್ಬಕ್ಕೆ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ. ಮೊದಲ ಟೀಸರ್‍ನಲ್ಲಿ ಶಿವರಾಜಕುಮಾರ್ ಪಾತ್ರವನ್ನು ಪರಿಚಯಿಸಿದ್ದ ನಿರ್ದೇಶಕ ಅರ್ಜುನ್‍ ಜನ್ಯ, ಈ ಬಾರಿ ಮೂರು ಪಾತ್ರಗಳನ್ನು ಪರಿಚಯಿಸಿದ್ದಾರೆ. ಒರಾಯನ್‍ ಮಾಲ್‍ನ ಪಿವಿಆರ್‌ನಲ್ಲಿ ನಡೆದ ಈ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ, ಅರ್ಜುನ್‍ ಜನ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದು ನನಗೆ ಬಹಳ ಇಷ್ಟವಾದ…

Read More