“ಫಸ್ಟ್ ಸ್ಯಾಲರಿ” (First salary) – ಕನಸುಗಳ ಹಾದಿ ನಾಮಾಂಕಿತ ಕಿರುಚಿತ್ರದ (Short Film) ಫಸ್ಟ್ ಪೋಸ್ಟರ್‌

ವಿದ್ಯಾರ್ಥಿ ಜೀವನದಿಂದ ಉದ್ಯೋಗ ಜೀವನದತ್ತ ಕೈಹಾಕುವ ಮೊದಲ ಹೆಜ್ಜೆಯ ಗುರುತು , ಅದೇ “ಫಸ್ಟ್ ಸ್ಯಾಲರಿ”(First salary) . ಈಗಾ ಅಂತಹದೆ ಒಂದು ನಿಜ ಜೀವನದಲ್ಲಿ ಆಗುವ “ಫಸ್ಟ್ ಸ್ಯಾಲರಿ” ಎಂಬ ವಿಶೇಷ ಶೀರ್ಷಿಕೆಯ ಮೂಲಕ ಕಿರುಚಿತ್ರ ಬರಲು ಸಜ್ಜಾಗಿದೆ .

ಜೀವನದಲ್ಲಿ ಕೆಲವು ಕ್ಷಣಗಳು ಮರೆಯಲಾಗದಂತಿರುತ್ತವೆ — ಅವುಗಳಲ್ಲಿ ಒಂದು “ಫಸ್ಟ್ ಸ್ಯಾಲರಿ” (First salary) ಪಡೆಯುವ ಕ್ಷಣ. ಹಾಗೆಯೆ ತಾಯ್ತಂದೆಗಳಿಗೆ ಕೊಡುವ ಮೊದಲ ಉಡುಗೊರೆ, ಸ್ನೇಹಿತರ ಜೊತೆ ಹಂಚಿಕೊಳ್ಳುವ ಖುಷಿ, ಅಥವಾ ಸ್ವಂತ ಕನಸಿನತ್ತ ಮೊದಲ ಹೆಜ್ಜೆ.

ಶ್ರೀರಾಘವೇಂದ್ರ ಚಿತ್ರವಾಣಿ ವತಿಯಿಂದ ಶ್ರೀ ಡಿ.ವಿ. ಸುಧೀಂದ್ರ ಅವರ ಆಶೀರ್ವಾದದೊಂದಿಗೆ ನಿರ್ಮಾಣ ಮಾಡಲಾಗಿದೆ . ದೀಪಾವಳಿ ಹಬ್ಬದ ಪ್ರಯುಕ್ತ “ಫಸ್ಟ್ ಸ್ಯಾಲರಿ”(First salary) – ಕನಸುಗಳ ಹಾದಿ ನಾಮಾಂಕಿತ ಕಿರುಚಿತ್ರದ (Short Film) ಫಸ್ಟ್ ಪೋಸ್ಟರ್‌ನ್ನು ಇ‌ನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ .

ಹೀಗೆ “ಫಸ್ಟ್ ಸ್ಯಾಲರಿ” ಎಂದರೆ ಕೇವಲ ಹಣದ ಅರ್ಥವಲ್ಲ, ಅದು ಭಾವನೆಯ ಕಥೆಯಾಗಿದೆ. ಇದೀಗಾ ಫಸ್ಟ್ ಸ್ಯಾಲರಿ (First salary) ಅನ್ನೋ ಈ ಪದ ಸಾಮಾಜಿಕ ಮಾದ್ಯಮದಲ್ಲಿ ಸದ್ದು ಮಾಡಿರುವ ಈ ಚಿತ್ರ ತೆರೆಗೆ ಬಂದ ಮೇಲೆ ಯಾವ ರೀತಿ ಕಾಣಿಸಬಹುದು ಎಂಬ ಕುತೂಹಲ ಜನರಿಗೆ ಹೆಚ್ಚಾಗಿದೆ .


ಇದನ್ನೂ ಓದಿ:-


ಹೆಚ್ಚಿನ ಓದಿಗಾಗಿ:-


ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!